ದುಂಭಿ

ಹೂಗಳಿರುವವು ಇಷ್ಟೊಂದು ಇಲ್ಲಿ
ಎಲ್ಲ ಸುಂದರ ಹೂಗಳೇ.
ಒಂದ ಬಿಟ್ಟು ಇನ್ನೊಂದು ಹಿಡಿದರೆ,
ಮೊದಲಿಗಿಂತ ಈಗಿನದು ಸುಂದರ.
ಮಕರಂದ ವಿರುವ ಹೂವನ್ನು ಹುಡುಕು
ಎಂದಿತು ನಿಸರ್ಗ ನನಗೆ.
ಆದರೆ ಸುಗಂಧಕ್ಕೆ ಮರುಳಾದೆ ನಾನು.
ಸುಗಂಧಕ್ಕೆ ಮರುಳಾಗಿ ಕುಳಿತೆ ಹೂಗಳ ಮೇಲೆ.
ಕುಳಿತರೆ ಏನು ಹಾಳಾಗಲ್ಲಿಲ್ಲಾ ಸಮಯ,
ಹೂಗಳಿಂದ ಹೂಗಳನು ಮೆಚ್ಚಿಸುತ
ಪಡೆದನು ಇನ್ನಷ್ಟು ಹೂಗಳನ್ನು,
ಮತ್ತೆ ಮರುಳಾಗಲು ನಿಸರ್ಗದಲ್ಲಿ.

ಭಾವನೆಯೆ ಲೋಕ

ಭಾವನೆಯ ನದಿಯಲಿ ವಿಹರಿಸಲು,
ಮನಸೊಂದಿದ್ದರೆ ಸಾಕು.
ನನಸಿನ ಜೀವನದಲ್ಲಿ ವಿರಮಿಸಲು,
ಕನಸಿನ ಕನವರಿಕೆ ಒಂದಿದ್ದರೆ ಸಾಕು.

ಏರುವದೇತಕೆ

ಧರೆಯಲಿದ್ದು ಆಗಸವನ್ನು ನೋಡಿ,
ಹೊರೆಟನು ಗಗನ ಚುಂಬಿಸಲು.
ಬಿದ್ದೆ ಎದ್ದೆ ತಡಕಾಡಿದೆ ಹುಡುಕಾಡಿದೆ
ಕೊನೆಗೂ ಮುಟ್ಟಿದೆ ಆ ಗಗನವ.
ಇನ್ನೇನು ಚುಂಬಿಸಬೇಕು ಅಷ್ಟರಲಿ,
ಕ್ಷಣ ತಡೆದು ನೋಡಿದೆನು,
ವಸುಂಧರೆಯನು!!!
ಛೇ ಏನು ಮಾಡಿದೆ ನಾನು,
ಇ ಸುಂದರ ಸೃಷ್ಟಿಯನು ಬಿಟ್ಟು,
ಮೇಲೇಕೆ ಏರಿದೆ ಧರೆಯನು ಮರೆತು.
ಚುಂಬಿಸಲೋಲ್ಲೆ ಆ ಗಗನವ.
ಕಂಬನಿಯೊಂದಿಗೆ ಇಳಿದೆ,
ಇಳೆಯ ಕಡೆಗೆ!
ಮಹಾತ್ಮನಾದರೆ ಸಿಗುವದೆನು?
ಮಾನವನಾದರೆ ಸಿಗುವದಿಲ್ಲವೇನು

ನಿಮಗೆ ಕಾಣದವಳು

ನಿಮಗೆ ಕಾಣದ ನನ್ನವಳು,
ನನ್ನ ಕವಿತೆಯವಳು, ನನ್ನ ಜೊತೆಗಿರುವವಳು.....
ನಿಮಗೆ ಕಾಣದವಳು.

ಮುಂಜಾನೆಯ ನಸುಗತ್ತಲಿನಲ್ಲಿ ಇನ್ನು ಕತ್ತಲು ತುಂಬಿರುವಾಗ,
ಮುಂಬರುವ ನಂಬಿಕೆ ನನ್ನವಳು.
ನಿಮಗೆ ಕಾಣದವಳು...

ಬಿಸಿಲಿದ್ದು ಮಳೆಬರುವಾಗ, ಪ್ರತಿ ಮಳೆಹನಿಯಲ್ಲೂ
ಕಾಣುವ ಸೂರ್ಯ ನನ್ನವಳು..
ನಿಮಗೆ ಕಾಣದವಳು...

ಪಡುವಣ ದಿಕ್ಕಿನಲ್ಲಿ ಸೂರ್ಯ ಮುಳುಗಿದ ಮೇಲೆ
ಮೋಡಗಳ ಮೇಲೆ ಬಣ್ಣದ ಚಿತ್ತಾರ ಮೂಡಿಸುವವಳು
ನಿಮಗೆ ಕಾಣದವಳು....

ಬೆಳಗಿನ ಹೊತ್ತಿನಲ್ಲಿ ಧರೆ ತುಂಬಾ, ಇಬ್ಬನಿ ತುಂಬಿರುವಾಗ.
ಕರಗಿಸುವ ಮೊದಲ ಸೂರ್ಯನ ಕಿರಣ ನನ್ನವಳು.
ನಿಮಗೆ ಕಾಣದವಳು...

ನಿಮಗೆ ಕಾಣದ ನನ್ನವಳು,
ನನ್ನ ಕವಿತೆಯವಳು, ನನ್ನ ಜೊತೆಗಿರುವವಳು.....
ನಿಮಗೆ ಕಾಣದವಳು.



ಮನಸು - ಕನಸಿನ ಲೋಕ

ಅಂದು ಕಂಡ ನೆನಪಿನಂಗಳದ ಪ್ರತಿಕ್ರಿಯೆಗೆ
ಎಲ್ಲವೂ ಸ್ತಬ್ಧವಾಯಿತು,
ಹಗಲಿನ ಸೂರ್ಯ ರಾತ್ರಿ ಚಂದಿರನ ತಂಪಿನಂತಾದ
ಸಾಗರವು ಅಲೆಗಳಿಲ್ಲದೆ ಶಾಂತವಾಯಿತು,
ಬೀಸಿದ ಬಿರುಗಾಳಿಯು ಹೆದರಿ ಓಡಿದಂತಾಯಿತು
ಮರೆತೆನೆಂದರು ನೆನಪು ಹುಡುಕಿ ಕರೆಯಿತು,
ಕತ್ತಲೆಯನು ಕರೆಯುವ ಬೆಳಕಿನಹಾಗೆ
ಚಲನೆಯನು ಮರೆತ ಗಾಳಿಯ ಹಾಗೆ,
ಮನಸ್ಸನು ಕನಸಿನ ಲೋಕಕ್ಕೆ ಕೊಟ್ಟರೆ
ಆಗುವದೇ ಹೀಗೆ.........

ಹುಡುಗುತನ

ಮುದುಕನಾದರೂ ಹುಡುಗುತನ ನಿಲ್ಲಲ್ಲೂಲ್ಲದು,
ಮಳೆನಿಂತರು ಹರಿಯುವ ನೀರು ನಿಲ್ಲಲ್ಲೂಲ್ಲದು,
ನಿದ್ದೆ ಮುಗಿದರು ಕನಸು ಕಾಣುವದು ನಿಲ್ಲಲ್ಲೂಲ್ಲದು,
ನಿಲ್ಲಿಸಲ್ಲಿಕ್ಕೆ ಏಕೇ ಮಿಡಿಯುತಿದೆ ಮನಸ್ಸು?
ಓಡುವ ಕನಿಸ್ಸಿಗೆ ಕಡಿವಾಣ ಹಾಕಲು
ಹಾತೊರೆಯುತಿದೆ ಮನಸ್ಸು.

ಸಾವಿನ ಶಾಶ್ವತೆಯೇನು ತಿಳಿದ ಮನಸ್ಸು,
ಜೀವನದ ನಿಶ್ಚಿತಕ್ಕೆ ಸೋತಿದೆ.
ಸಾವಿಲ್ಲದೆ ಅಮರಾನಗುವ ಗುರಿಗೆ,
ಇಟ್ಟ ಮೊದಲ ಹೆಜ್ಜೆ ಇ ಕವಿತೆಯಾಗಿದೆ.