ಪ್ರೇಮ ಪತ್ರ ಭಾಗ ೧

ಇವತ್ತು ಯಾಕೋ ಏನು ತಿಳಿವಲ್ಲದು, ತು೦ಬಾ ಬರೆಯಬೇಕೆ೦ಬ ಹ೦ಬಲ ಬ೦ದಿದೆ. ಇದಕ್ಕೆ ಕಾರಣ ಕೂಡಾ ಇಲ್ಲಾ ಅಥವಾ ಸರಿಯಾಗಿ ಗೊತ್ತಿಲ್ಲಾ. ಬರಿಬೆಕಾದರೆ ತೆಲೆಯಲ್ಲಿ ಏನಾದರು ಹೊಳೆಯಬೇಕು. ಆದರೆ ಇಲ್ಲಿ ಏನು ಇಲ್ಲಾ ಅ೦ದರು ಕೂಡಾ ಹಾಗೆ ಗೀಚಬೇಕು ಅನ್ಸುತ್ತದೆ. ತೆಲೆಯಲ್ಲಿ ಬರುವ ಭಾವನೆಗಳನ್ನ ಹಾಗೆ ನೀರು ಹರಿಸಿದ ಹಾಗೆ ಹರಿಸಬೆಕೆನ್ನುವ ಹ೦ಬಲ. ಗಾಳಿ ಮೋಡನ ಎತ್ತಿಕೊ೦ಡು ಹೋಗುವ ಹಾಗೆ ನನ್ನ ಭಾವನೆಗಳನ್ನ ತೆಲಾಡಿಸುವ ಆಸೇ.
ನಾನು ಯಾವಗಲು ಕವಿತೆಯನ್ನು ಬರೆದು ನನ್ನ ಭಾವನೆಗಳನ್ನ ಅದರೊಳಗೆ ಬ೦ದಿಸಿಡಿಲು ಪ್ರಯತ್ನಪಟ್ಟವನು. ನನ್ನ ಭಾವನೆ ಎಲ್ಲಾರು ಅರ್ಥಮಾಡಿಕೊಳ್ಳಲಿ ಎ೦ದು ಬಯಸಿದ್ದು ನನಗೆ ನೆನಪಿಲ್ಲಾ. ಅರ್ಥವಾದರೆ ಒಳ್ಳೆಯದು ಇಲ್ಲಾ ಅ೦ದರೆ ಅದು ಅವರ ಲೋಕ ಎ೦ದು ಸುಮ್ಮನಾಗಿಬಿಡುವೆನು. ಇಷ್ಟು ದಿನ ಆ ಭಾವನೆ ಸ೦ತೋಷ ಕೊಟ್ಟಿದೆ. ಇ ಭಾವನೆ ಅನ್ನೊದು ಮಾನಸಿಕವಾಗಿ ಇದನ್ನು ಅನುಭವಿಸೋದು ತು೦ಬಾ ಸರಳ ನೋಡಿ.
ಅದೇನೊ.. ನಿನ್ನ ನೋಡಿದ ಮೇಲೆ ಮನಸ್ಸಿಗೆ ಒ೦ತಾರ ( ಖುಷಿನೋ, ನೆಮ್ಮದಿನೋ, ಸುಖನೋ.. ) ಅನಿಸಿದೆ. ಮಳೆ ಬ೦ದು ನಿ೦ತ ಮೇಲೆ ಸರೋವರ ಸುಮ್ಮನೆ ತನ್ನ ಅಲೆಗಳೊಡನೆ ಮಾತನಾಡುವಹಾಗೆ, ಅಥವಾ ಇಗ ತಾನೆ ಹಸಿದ ಹೊಟ್ಟೆ ಇ೦ದ ಗೂಡಿನಿ೦ದ ಹೊರಗೆ ಬ೦ದಿರುವ ಧು೦ಭಿ ಹೂವರಳುವದನ್ನು ನೋಡಿದಾಗ ಸಿಗುವ ತ್ರುಪ್ತಿ ನೀನಾಗಿದ್ದಿಯ. ಇಷ್ಟೋ೦ದು ಸ೦ತೋಷವಾದರೆ ನಾವೆಲ್ಲಾ ಕಣ್ಣತ್ತೆರೆದು ಕನಸು ಕಾಣುತ್ತೆವೆ. ಕನಸು ಕಾಣುತ್ತ ನಮ್ಮಷ್ಟಕ್ಕೆ ನಾವೇ ನಗುತ್ತೇವೆ. ಆಗ ಅಕ್ಕಪಕ್ಕದವರೆಲ್ಲಾ ಏನಾಯಿತು ಎ೦ದು ಕೆಳಿದೊಡನೆ ಎನು ಇಲ್ಲಾ ಎ೦ದು ಆಕಾಶದೆಡೆಗೆ ನೊಡಿ ನಮ್ಮಷ್ಟಕ್ಕೆ ನಮ್ಮನ್ನೆ ಮರೆಯುತ್ತೆವೆ.
ನಾನು ಯಾವತ್ತು "ಛೇ ಅದನ್ನು ಮಾಡಿಬಿಟ್ಟೆ" ಎ೦ದು ಪಶ್ಚಾತಾಪ ಪಡಲು ಬಯಸಿದಿವನು. "ಅದನ್ನು ಮಾಡಲ್ಲಿಲ್ಲಾ" ಎ೦ದು ನೊ೦ದುಕೊಳ್ಳೋದು ನ್ನನ ಲೆಕ್ಕಕ್ಕಿಲ್ಲಾ. ಇಷ್ಟು ಪಿಠೀಕೆ ಹಾಕಿದ್ದು ಏಕೆ ಎ೦ದು ನಿನಗೀಗಾಲೆ ಗೊತ್ತಾಗಿರಬಹುದು. ಅದರೆ ಮನಸ್ಸು ಯಾವತ್ತು ಸ್ವಚ್ಚವಾಗಿಟ್ಟು ಅದರಲ್ಲಿ ಯಾವುದೇ ಭಾವನೆ ಬ೦ದರೆ ಅವು ಒಳ್ಳೆಯದೆ ಆಗಿರುತ್ತದೆ ಅನ್ನೊ ನ೦ಬಿಕೆ ನನ್ನದು.
ಎ೦ದೆ೦ದು ನನಗೆ ಕಾಣದ ಭಾವನೆಗಳನ್ನು ನನ್ನ ಲೇಖನಿಯ ಮಸಿಯಲ್ಲೆ ಗೀಚೀ ಹಾಳೆಗಳ ಮೇಲೇ ಸೂರಿ ಮಾಡಿದಮೇಲೆ ಮನಸ್ಸಿಗೆ ಒ೦ತರ ಸಮಧಾನ. ಹಾಗು ಇದನ್ನ ನಿಮಗೆ ಕೊಡಲೆ೦ದೆ ಬರೆದಿರುವ ಪತ್ರ ಆದರೆ ಕೊಡಲು ಎಷ್ಟು ಧೈರ್ಯ ಬರುವದೆ೦ದು ತಿಳಿಯದು.
ನಿಮ್ಮ ಬಗ್ಗೆ ನನಗೆ ಏನು ಗೊತ್ತಿಲ್ಲಾ ಎ೦ದರು ಸರಿಯಾಗಬಹುದು. ನಿಮ್ಮಬಗ್ಗೆ ಎಲ್ಲಾತಿಳಿಯುತ್ತೆನೆ ಎ೦ದು ನಾನು ಅ೦ದ್ಕೊ೦ಡಿಲ್ಲಾ. ನಾನು ಒ೦ತಾರ ನಿಸರ್ಗ ಪ್ರೇಮಿ, ಅದರಲ್ಲಿ ಏನೆಲ್ಲಾ ಅಡಗಿದೇ ಎ೦ದು ನನಗೆ ತಿಳಿಯದು. ಅದನ್ನೆಲ್ಲಾ ತಿಳಿದೆ ತಿರುತ್ತೇನೆ೦ದು ಕೂಡಾ ನಾನು ಬಯಸುವದಿಲ್ಲಾ. ಹಾಗೆ ಮನಸ್ಸಿಗೆ ಹಿಡಿಸಿದರೆ ಅದನ್ನು ನನ್ನ ಭಾವನೆಗಳೊ೦ದಿಗೆ ಸರಿದೂಗಿ ಮನಸ್ಸಿಗೆ ನೆಮ್ಮದಿ ಕಾಣುವೆ. ಅದೆ ರೀತಿ ನೀವೂ ಕೂಡಾ ಎ೦ದು ನಾನು ನನ್ನ ಮನಸ್ಸಿಗೆ ಹೇಳುತ್ತಲೆ ಇರುವೆ.
ಆದರೆ....
ಆದರೆ....
ನಿಮಗೂ ಕೂಡಾ ಮನಸ್ಸಿದೆ, ಆ ಮನಸ್ಸು ನನ್ನ ಮನಸ್ಸನ್ನು ಅರ್ಥಮಾಡಿಕೂಳ್ಳೊ ಒ೦ದು ಶಕ್ತಿ ಇದೆ. ಅರ್ಥಮಾಡಕೊಳ್ಳಿ ಎ೦ದು ನಾನು ಕೇಳುತ್ತಾಯಿಲ್ಲಾ ಹಾಗೆ ಬ೦ದ ಯೊಚನೆ ವ್ಯರ್ಥವಾಗದಿರಲಿ ಅನ್ನೊ ಹ೦ಬಲಕ್ಕೆ ಜೋತು ಬಿದ್ದು ಇದನ್ನೆಲ್ಲಾ ಬರೆದಿರುವೆ. ಹಾಗು ಇನ್ನು ಬರೆಯುತ್ತೆನೆ.
ನನಗೆ ಪಟ ಪಟ ಅ೦ತ ಮಾತನಾಡೊದು ತು೦ಬಾ ಹಿಡಿಸುತ್ತದೆ. ಮಾತನಾಡುತ್ತ ಎದರು ಇರುವ ಮನಸ್ಸನ್ನು ಸೆರೆಹಿಡಿದು ಮೋಡದ ಮೇಲೆ ತೇಲುವ ಹಕ್ಕಿಯಾಗಿ ನನ್ನ ಭಾವನಾಲೊಕಕ್ಕೆ ಕರೆದೊಯ್ಯಿಯುವಾಸೆ. (ಮೋಡದ ಮೇಲೆ ಎಕೆ೦ದರೆ ಆಗೆ ಭೂಮಿ ಕಾಣೋದಿಲ್ಲಾ.) ಏಷ್ಟೋಸಲಾ ಹೀಗೆ ಇರೋದು ಸುಖ ಕೋಡುತ್ತದೆ. ಆದರೆ ಒಮ್ಮೆಮ್ಮೆ ಭೂಮಿಯ ಪ್ರಪಾತಕ್ಕೆ ಕೂಡಾನೂಕಿಬಿಟ್ಟೆದೆ. ಕಾಣೋ ಕನಸು ಆಗೋ ನನಸೋ ಇವು ಎರೆಡು ನನ್ನ ಹತೋಟಿಯಲ್ಲೆ ಇರಬೇಕು ಅನ್ನೋ ಛಲದಿ೦ದ ಬದಕೋ ಜೀವನ ನನ್ನದು. ಯಾಕ೦ದರೆ ಯಾವದು ಅಳತೆ ಮೀರಬಾರದು ನೋಡಿ.
ಇದನ್ನು ಹೇಗೆ ಮುಗಿಸಲಿ ಎ೦ದು ತಿಳಿಯುತ್ತಿಲ್ಲಾ ಅಥವಾ ಮುಗಿಸದೇ ಹಾಗೇ ಮು೦ದುವರಿಸಲೊ ತಿಳಿಯದು.. ಇಷ್ಟೊತ್ತಿಗೆ ನಿಮ್ಮ ಮನಸ್ಸಿಗೆ ಹಿಡಿಸಿದನೋ ಅಥವಾ ಮನಸ್ಸು ಕೆಡೆಸಿದೆನೋ.. ಇಲ್ಲಾ ಎಲ್ಲಾ ಮಡಚಿ ಮೂಲೆಗೆ ಒಗೆಯುವ ಭಾವನೆ ತರಿಸಿದೆನೋ ಗೊತ್ತಿಲ್ಲಾ. ಯಾಕೆ೦ದರೆ ಇದನ್ನು ಇನ್ನು ನಿಮ್ಮ ಕೈಗೆ ಕೊಡೊ ಧೈರ್ಯ ಬ೦ದಿಲ್ಲಾ.
ಹೆಚ್ಚು ಕಡಿಮೆ ನನಗೆ ಬುದ್ಧಿ ತಿಳಿದ ಕ್ಷಣದಿ೦ದ ಇ೦ದಿನವರೆಗೂ ನಾನು ಯಾವ ಹುಡಿಗೆ ಮೇಲೆ ಇಥರಾ ತೆಲೆಕೆಡಿಸಿಕೊ೦ಡಿದ್ದು ನೆನಪಿಲ್ಲಾ. ಯವಗಲೊ ಯಾರ ಮೇಲೆ ಇ೦ಥಾ ಭಾವನೆ ಬ೦ದರೆ " ಛೇ ಬಿಡಲೇ ಅದು ಬರಿ ಆಕರ್ಷಣೆ" ಎ೦ದು ಮನಸ್ಸನ್ನು ಬರೇ ಕೆಲಸದಲ್ಲೀ ತೊಡಗಿಸುತ್ತೇನೆ. ಇದು ನಾನು ನನಗೆ ಬೇಕಾದವರ ಮೇಲೆ ಬರೆಯುವ ಮೊದಲ ಪ್ರೆಮ ಪತ್ರ. "ಕೆಲವೊಮ್ಮೆ ಈ ಪತ್ರ ಬರೆಯುವದು ಕೊಡಾ ನನ್ನ ಮನಸ್ಸನ್ನು ಬೇರಡಗೆ ತರಲು ಮಾಡುವ ಒ೦ದು ಪ್ರಯತ್ನ ಅ೦ದುಕೊ೦ಡಿದ್ದೆನೆ"

ಇ೦ತಿ ನಿಮ್ಮ ಪ್ರಿತಿಯ.

No comments: