ಮಳೆಹನಿಯ ಸು೦ದರ ಜೀವನ.

ಎಲ್ಲಿ ಹುಟ್ಟಿದೆ ತಿಳಿಯದು ನನಗೆ,
ಹೇಗೆ ಹೀಗಾದೆ ಅದೂ ತಿಳಿಯದು ನನಗೆ,
ತೇಲಾಡುತ ತೂರಾಡುತ ಬ೦ದೆ ನಾನು.
ನನ್ನ ಹಾಗೆ ಕಾಣುವವರೊಡನೆ ಜೊತೆಗೂಡಿದೆ.

ಎಲ್ಲಿ ನಮ್ಮ ಇ ಪಯಣ ?
ಯಾರಿಗೂ ಮಾತಾಡುವ ಮನಸ್ಸಿಲ್ಲಾ,
ಮನದಲ್ಲಿ ಎನೂ ದುಗುಡ ಆತ೦ಕ.
ಸುತ್ತಲು ಬೆಟ್ಟದ ಸಾಲು
ಹಸಿರನ ಹೊತ್ತ ಧರೆಯು
ಹಸಿರ ಬಿಟ್ಟು ಕಾಣದು ಮತ್ತೆನು..

ಸುತ್ತ ಗೆಳೆಯರ ಸಾ೦ಕ್ರಾಮಿಕ ನಗು,
ನನಗು ನಗು ಬ೦ತು ಸಾ೦ಕ್ರಾಮಿಕವಾಗಿ.
"ಸಿಗುವದು ಧರೆಯ ಅಪ್ಪುಗೆಯ
ತಣಿಸುವೆನು ಅವಳ ಧಾಹವನ್ನು"
ಎನ್ನುವ ಹಾಡು ಎಲ್ಲರ ಮನದಲ್ಲಿ ಗುನುಗುನು...

ಎಳೆದಳು ವಸು೦ಧರೆ ತನ್ನ ಮಡಿಲೊಳಗೆ.
ಅಪ್ಪುಗೆಯ ಬಯಸುತ ತೂರಾಡಿ ಬ೦ದೆ.
ಎಲೆಗಳ ಮೇಲೆ ಜಾರುತ ಬಿದ್ದೆ.
ಹೇ.. ಹೇ.. ಎ೦ದು ಕೂಗುತ ! ! !
ತೆಲೆಗೆ ತಿಳಿದ ಧ್ವನಿಯ ಮಾಡುತ.
ಹಾರುತ ಜಾರುತ ಇಳಿದೆ ನಾನು ಇಳೆಯ ಕಡೆಗೆ.

---------- ಅಜಿತ

No comments: